ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)

೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಆಗಿನ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್.‌ ಯಡಿಯೂರಪ್ಪನವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ / ನವೆಂಬರ್‌ ೧ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ ನಾಲ್ಕು ತಿಂಗಳುಗಳು, ಲಾಕ್‌ಡೌನ್‌ನ ಮೂರು ತಿಂಗಳುಗಳು, ಅನ್‌ಲಾಕ್‌ ಕಾಲದ ಐದು ತಿಂಗಳುಗಳು – ಹೀಗೆ ವಿಂಗಡಿಸಬಹುದು. ಕೊನೆಯ ಭಾಗದಲ್ಲಿ ನನ್ನ ಸ್ವಯಂ ಗೃಹನಿರ್ಬಂಧದ ಎರಡು ವಾರಗಳೂ ಸೇರಿವೆ. ೨೦೨೧ ರಲ್ಲಿ ಕೊರೋನಾ ಮಾದರಿಯ ಅನಾರೋಗ್ಯದಿಂದ (ಲಾಕ್‌ಡೌನ್‌ ಅವಧಿಯಲ್ಲಿಯೇ) ಒಂದೂವರೆ ತಿಂಗಳು ಕೆಲಸ ಮಾಡಲಾಗಲಿಲ್ಲ. ಈ ವರ್ಷವೂ ಕೊರೋನಾದಿಂದಾಗಿ ಸಾಕಷ್ಟು ದಿನಗಳಲ್ಲಿ ಸೂಕ್ತ ಕಾರ್ಯನಿರ್ವಹಣೆ ಸಾಧ್ಯವಾಗಲಿಲ್ಲ ಎಂಬುದು ವಾಸ್ತವ. ನನ್ನ ನೇಮಕಾತಿಯಿಂದ…

"ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)"

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

೨೦೧೯ರ ಅಕ್ಟೋಬರ್‌ ಕೊನೆಯ ವಾರ ನನ್ನನ್ನು ಸನ್ಮಾನ್ಯ ಮುಖ್ಯಮಂತ್ರಿಯವರು ಇ – ಆಡಳಿತ ಸಲಹೆಗಾರ ಎಂದು ನೇಮಿಸಿದರು. ನಾನು ವಸ್ತುಶಃ ಅಕ್ಟೋಬರ್‌ ೩೧ ರಿಂದ ನನ್ನ ಕೆಲಸ ಆರಂಭಿಸಿದೆ. ಅಂದಿನಿಂದ ಲೆಕ್ಕ ಹಿಡಿದರೆ ಕೊರೋನಾ ಪೂರ್ವ ನಾಲ್ಕು ತಿಂಗಳುಗಳು, ಲಾಕ್‌ಡೌನ್‌ನ ಮೂರು ತಿಂಗಳುಗಳು, ಅನ್‌ಲಾಕ್‌ ಕಾಲದ ಐದು ತಿಂಗಳುಗಳು – ಹೀಗೆ ವಿಂಗಡಿಸಬಹುದು. ಕೊನೆಯ ಭಾಗದಲ್ಲಿ ನನ್ನ ಸ್ವಯಂ ಗೃಹನಿರ್ಬಂಧದ ಎರಡು ವಾರಗಳೂ ಸೇರಿವೆ.

"ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ"

ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

ನಾನು ಹೂವಿನ ಹಡಗಲಿಯಲ್ಲಿ 1980-81 ರಲ್ಲಿ ಜಿಬಿಆರ್‌ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದಾಗ ಎಬಿವಿಪಿಗಿಂತ ಎಸ್‌ಎಫ್‌ಐ ವಾಸಿ ಎಂಬ ಅಭಿಪ್ರಾಯಕ್ಕೆ ಬಂದಿದ್ದೆ. ಆಗ ಅಲ್ಲಿ ಎಸ್‌ ಎಸ್‌ ಹಿರೇಮಠರು ನನ್ನ ಕನ್ನಡ ಅಧ್ಯಾಪಕರಾಗಿದ್ದರು. ಅಲ್ಲಿನ ಎಸ್‌ಎಫ್‌ಐ ಮಿತ್ರರಿಂದ ನಾನು ಹಲವು ಕ್ರಾಂತಿಗೀತೆಗಳನ್ನು ಕಲಿತು ಹಾಡುತ್ತಿದ್ದೆ. ಅವುಗಳಲ್ಲಿ ಮುಖ್ಯವಾಗಿ ನನಗೆ ಈಗಲೂ ಗುನುಗಲು ನೆನಪಿರುವುದು ಕವಿ ಸಿದ್ದಲಿಂಗಯ್ಯ ಅವರ ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ.. ಹಾಡು. ಅದು ಹೀಗಿದೆ.

"ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)"

ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !

ಮಿತ್ರಮಾಧ್ಯಮ ಟ್ರಸ್ಟ್‌ನಿಂದ ಮುಕ್ತಜ್ಞಾನಕ್ಕಾಗಿ ಡಾ. ಎಲ್‌ ಆರ್‌ ಹೆಗಡೆಯವರ ಅಪ್ರಕಟಿತ ಜಾನಪದ ಸಂಗ್ರಹಗಳ ಆರು ಡಿಜಿಟಲ್‌ ಪುಸ್ತಕಗಳು ಇಂದು ಲೋಕಾರ್ಪಣೆಗೊಂಡವು.

"ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !"

ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!

ಅಂತೂ ಎರಡೂವರೆ ವರ್ಷಗಳ ಶ್ರಮ ಒಂದು ತಾರ್ಕಿಕ ಕೊನೆ ತಲುಪುತ್ತಿದೆ. ಇಂದು ಜಾನಪದ ಸಂಗ್ರಹಕಾರ, ನಮ್ಮ ನಾಡು ಕಂಡ ಮಹಾನ್‌ ಚೇತನ ಡಾ. ಎಲ್‌ ಆರ್‌ ಹೆಗಡೆಯವರ ಪುಣ್ಯತಿಥಿಯ ದಿನ (೧೫ ಸೆಪ್ಟೆಂಬರ್‌). ಅವರ ಆರು ಅಪ್ರಕಟಿತ ಜಾನಪದ ಸಂಗ್ರಹಗಳನ್ನು ಸೆ. ೧೯ ರಂದು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸೌಧದದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಮಿತ್ರಮಾಧ್ಯಮ ಟ್ರಸ್ಟ್‌ ವತಿಯಿಂದ ಮುಕ್ತಜ್ಞಾನದ ಅಭಿಯಾನವಾಗಿ ನಡೆದ ಈ ಸಂಗ್ರಹಗಳ ಡಿಜಿಟಲ್‌ ಪ್ರತಿಗಳನ್ನು ಕರ್ನಾಟಕ ಸರ್ಕಾರದ ಕಣಜ ಜಾಲತಾಣ ಹಾಗೂ ಭಾರತ ಸರ್ಕಾರದ ಭಾರತವಾಣಿ ಜಾಲತಾಣದಲ್ಲಿ ಶೀಘ್ರವೇ ಪ್ರಕಟಿಸಲಾಗುವುದು. ಈಗ ಇಲ್ಲಿಯೂ ಸಾರ್ವಜನಿಕರಿಗಾಗಿ ಪುಸ್ತಕಗಳನ್ನು ನೀಡಲಾಗಿದೆ. ಈ ಸಂಗ್ರಹಗಳನ್ನು (ಹಾಗೂ…

"ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!"

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್‌ ಎಲ್‌ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.

"www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ"

ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ

ಕ್ರಿಸ್ತಶಕ ೭೯ರಲ್ಲಿ ವೆಸೂವಿಯೆಸ್ ಅಗ್ನಿಪರ್ವತದ ಲಾವಾರಸದಲ್ಲಿ ಹೂತುಹೋದ ಪಾಂಪೇ ನಗರ ಗೊತ್ತಲ್ಲ? ಕ್ರಿಸ್ತಶಕ ೧೭೫೦ರಲ್ಲಿ ನಡೆದ ಉತ್ಖನನದ ಸಂದರ್ಭದಲ್ಲಿ ಈ ನಗರದ ಕೆಲವು ಮನೆಗಳಲ್ಲಿ ಸುರುಳಿಯಾಗಿ ಸುತ್ತಿಕೊಂಡ ಹಲವು ವಸ್ತುಗಳು ದೊರೆತವು. ಅವೆಲ್ಲವೂ ಸುಟ್ಟುಹೋದ ಬಟ್ಟೆಗಳಿರಬಹುದು ಎಂದೇ ಊಹಿಸಿದ್ದರು. ಅಕಸ್ಮಾತ್ತಾಗಿ ಅಂಥ ಒಂದು ಸುರುಳಿ ಕೆಳಗೆ ಬಿದ್ದು ಒಡೆದುಹೋದಾಗ ಪುಸ್ತಕವೊಂದು  ಹೊರಬಿತ್ತು! ಇಂಥ ನೂರಾರು ಪುಸ್ತಕಗಳನ್ನು ಅಲ್ಲಿ ಪತ್ತೆ ಹಚ್ಚಲಾಯಿತು. ಅವುಗಳಲ್ಲಿ ಲೂಕ್ರಿಶಿಯಸ್‌ನ ಸಮಕಾಲೀನ ಗ್ರೀಕ್ ತತ್ವಶಾಸ್ತ್ರಜ್ಞ ಫಿಲೋಡೆಮಸ್‌ನ ಕೃತಿಗಳೂ ಇದ್ದವು. ಮುಂದೆ ೧೯೮೭ರಲ್ಲಿ ಹೊಸ ತಂತ್ರಜ್ಞಾನದ ನೆರವಿನ ಮೂಲಕ ಈ ಸುರುಳಿಗಳಲ್ಲಿ ಏನಿದೆ ಎಂಬ ಬಗ್ಗೆ ಮತ್ತೊಂದು ಸಂಶೋಧನಾ ಅಭಿಯಾನ ನಡೆಯಿತು. ತೊಮಾಸೋ ಸ್ಟಾರೇಸ್ ಎಂಬಾತ ಒಂದು ಸುರುಳಿಯ ಮೈಕ್ರೋ ಛಾಯಾಗ್ರಹಣ ಮಾಡಿದ. ಲೂಕ್ರಿಶಿಯಸ್‌…

"ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ"

ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು

2020 ರ ಫೆಬ್ರುವರಿ 15 ರಂದು ಧಾರವಾಡದಲ್ಲಿ ನಡೆದ ಡಾ. ಸಿ ಆರ್‌ ಯರವಂತೇಲಿಮಠ್‌ ಸನ್ಮಾನ ಸಮಿತಿ ಸಂಘಟಿಸಿದ್ದ ಅನುವಾದ ಕುರಿತ ರ ಆಷ್ಟ್ರೀಯ ಸಂಕಿರಣದಲ್ಲಿ ನಾನು ಮಂಡಿಸಿದ ಕೆಲವು ವಿಚಾರಗಳ ಆಯ್ದ ಭಾಗಗಳು ಇಲ್ಲಿವೆ:

"ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು"

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

ಮೇ 28: ಸಾವರ್‌ಕರ್‌ ಜನ್ಮದಿನ. ಅವರಿಗೆ ನನ್ನ ನಮನ. ಸಾವರ್‌ಕರ್‌ ಜನ್ಮದಿನ. ಅವರಿಗೆ ನನ್ನ ನಮನ. ವೈಭವ್‌ ಪುರಂಧರೆ ಬರೆದ ಸಾವರ್‌ಕರ್‌: ದ ಟ್ರೂ ಸ್ಟೋರಿ ಆಫ್‌ ದ ಫಾದರ್‌ ಆಫ್‌ ಹಿಂದುತ್ವ ಪುಸ್ತಕವನ್ನು (SAVARKAR: THE TRUE STORY OF THE FATHER OF HINDUTVA : VAIBHAV PURANDHARE / Juggernaut, 2019) ಇವತ್ತಷ್ಟೇ ಓದಿ ಮುಗಿಸಿದೆ. ಸ್ವತಃ ಮರಾಠಿ ಬಲ್ಲ ಪುರಂಧರೆ ಅವರು ಮರಾಠಿ ಭಾಷೆಯಲ್ಲಿದ್ದ ಆಕರಗಳನ್ನೂ ಹುಡುಕಿ, ಸಂಶೋಧಿಸಿ ಈ ಪುಸ್ತಕ ಬರೆದಿದ್ದಾರೆ. ಆದ್ದರಿಂದಲೇ ನನ್ನ ಮಟ್ಟಿಗೆ ಇದು ಸಾವರ್‌ಕರ್‌ ಅವರ ಕುರಿತ ಅಧಿಕೃತ ಪುಸ್ತಕ.   ಈ ಪುಸ್ತಕದಲ್ಲಿ ಇರುವ ಕೆಲವು ಮಾಹಿತಿಗಳನ್ನು ನನ್ನ ಅಭಿಪ್ರಾಯಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

"ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      "

ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ

ಈಗಾಗ್ಲೇ ಕನ್ನಡ ಮಾಧ್ಯಮಗಳಲ್ಲಿ ಕೊರೋನಾವೈರಸ್‌, ಸಿಡುಬು, ಸ್ಪಾನಿಶ್‌ ಫ್ಲೂ, ಬ್ಲಾಕ್‌ ಡೆತ್‌ – ಇತ್ಯಾದಿ ಮಹಾಪಿಡುಗುಗಳ ಬಗ್ಗೆ ಲೇಖನಗಳನ್ನು ಓದಿರುತ್ತೀರಿ. ಇನ್ನೂ ಪೋಲಿಯೋ ಸರದಿ ಬಂದಿಲ್ವಲ್ಲ ಅಂತ ಕಾಯ್ತಾ ಇದ್ದೆ. ಮೊನ್ನೆ ಯಾತಕ್ಕೋ ನಾನೂ ಪೋಲಿಯೋ ವೈರಸ್‌ ಸೋಂಕಿನಿಂದ ಬದುಕಿ ಉಳಿದವನು ಎಂಬ ಬಾಲ್ಯದ ನೆನಪಾಗಿ ನಾನೇ ಯಾಕೆ ಪೋಲಿಯೋ ಕತೇನ ನಿಮಗೆ ಹೇಳ್ಬಾರ್ದು ಅಂತ ಯೋಚಿಸಿ ಇಷ್ಟು ಬರೀಲಿಕ್ಕೆ ಹೊರಟೆ! ಈಗ್ಲೂ ವಿಶ್ವದಾದ್ಯಂತ ಪೋಲಿಯೋ ಪೀಡೆಗೆ ತುತ್ತಾಗಿ ಜೀವನ ತಳ್ತಾ ಇರೋ 20 ಲಕ್ಷ ಜನ ಇದಾರೆ ಅಂದಮೇಲೆ ಪೋಲಿಯೋ ಘನತೆ ಏನು ಅಂತ ಅರ್ಥ ಆಯ್ತ?!

"ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ"